acsbilagi@gmail.com Pragathi Tower, Bus Stand Opposite, Bilagi, Bagalkot
About

ವಿಶ್ವಾಸ • ಪಾರದರ್ಶಕತೆ • ಆರ್ಥಿಕ ಶಕ್ತೀಕರಣ

ಅನ್ನದಾತ ಸಹಕಾರ ಸಂಘ ನಿಯಮಿತ, ಬೀಳಗಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 8ರನ್ವಯ ಸ್ಥಾಪನೆಯಾಗಿ, ಸಹಕಾರದ ಮೌಲ್ಯಗಳು, ಪಾರದರ್ಶಕ ಆಡಳಿತ ಮತ್ತು ಸದಸ್ಯರ ವಿಶ್ವಾಸವನ್ನು ಆಧಾರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಾಗಿದೆ. ಬಾಗಲಕೋಟ ಕಾರ್ಯಕ್ಷೇತ್ರದಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿರುವ ಸಂಘವು ಸದಸ್ಯರು ಹಾಗೂ ಗ್ರಾಹಕರ ಆರ್ಥಿಕ ಶಕ್ತೀಕರಣಕ್ಕಾಗಿ ವಿವಿಧ ರೀತಿಯ ಠೇವಣಿ ಯೋಜನೆಗಳು ಮತ್ತು ಸುಲಭ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಂಘವು ತನ್ನ ಸ್ಥಾಪನೆಯಿಂದಲೇ ನಿರಂತರ ಬೆಳವಣಿಗೆಯನ್ನು ದಾಖಲಿಸಿದೆ.

  • ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 8ರನ್ವಯ ಸ್ಥಾಪನೆ

  • ಬಾಗಲಕೋಟ ಜಿಲ್ಲೆಯಲ್ಲಿ ಸೇವಾ ವಿಸ್ತರಣೆ

  • ಪಾರದರ್ಶಕ ಆಡಳಿತ ಮತ್ತು ಸದಸ್ಯರ ವಿಶ್ವಾಸ ಆಧಾರಿತ ಕಾರ್ಯನಿರ್ವಹಣೆ

About

ಸದಸ್ಯರ ಸಮೃದ್ಧಿಯೇ ನಮ್ಮ ಧ್ಯೇಯ

ಸದಸ್ಯರ ಸಂಖ್ಯೆ 293ರಿಂದ 356ಕ್ಕೆ ಏರಿಕೆಯಾಗಿದ್ದು, ಶೇರು ಬಂಡವಾಳವು ರೂ.23,55,500 ರಿಂದ ರೂ.34,17,500ಕ್ಕೆ ಹೆಚ್ಚಳಗೊಂಡಿದೆ. ಕಾಯ್ದಿಟ್ಟ ನಿಧಿಗಳು ಮತ್ತು ಇತರೆ ನಿಧಿಗಳು ರೂ.2,87,180ರಿಂದ ರೂ.3,83,980ಕ್ಕೆ ಏರಿಕೆಯಾಗಿರುವುದು ಸಂಘದ ಆರ್ಥಿಕ ಸದೃಢತೆಯನ್ನು ತೋರಿಸುತ್ತದೆ. ಸದಸ್ಯರ ವಿಶ್ವಾಸದ ಫಲವಾಗಿ ಠೇವಣಿಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ರೂ.8,35,92,590ರಿಂದ ರೂ.14,84,84,785ಕ್ಕೆ ಹೆಚ್ಚಳವಾಗಿದೆ. ಸದಸ್ಯರ ಹಿತದೃಷ್ಟಿಯಿಂದ ರಾಷ್ಟ್ರೀಕೃತ ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳಿಗಿಂತ ಸ್ಪರ್ಧಾತ್ಮಕ ಬಡ್ಡಿದರ ನೀಡಲಾಗುತ್ತಿದ್ದು, ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಹಾಗೂ ಮಾಜಿ ಸೈನಿಕರಿಗೆ ಹೆಚ್ಚುವರಿ 0.50% ಬಡ್ಡಿದರ ಸೌಲಭ್ಯ ಒದಗಿಸಲಾಗಿದೆ. ಸಂಘದ ಭದ್ರತೆಗಾಗಿ ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ರೂ.1 ಕೋಟಿಗೂ ಅಧಿಕ ಹೂಡಿಕೆ ಮಾಡಲಾಗಿದೆ.


ಸದಸ್ಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮಧ್ಯಮ ಹಾಗೂ ದೀರ್ಘಾವಧಿ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಸಾಲ ವಿತರಣೆ ರೂ.3,57,67,717ರಿಂದ ರೂ.14,76,56,695ಕ್ಕೆ ಹೆಚ್ಚಳಗೊಂಡಿದೆ. ದುಡಿಯುವ ಬಂಡವಾಳವು ರೂ.20,86,35,270ರಿಂದ ರೂ.23,12,49,285ಕ್ಕೆ ಏರಿಕೆಯಾಗಿದೆ. 2024–25ನೇ ಸಾಲಿನಲ್ಲಿ ಸಂಘವು ರೂ.7,61,943.99 ಲಾಭ ಗಳಿಸಿದೆ. ಸಂಘದ ಆಡಳಿತ ವ್ಯವಸ್ಥೆ ಶಿಸ್ತುಬದ್ಧವಾಗಿದ್ದು, ವರ್ಷದಲ್ಲಿ 12 ನಿರ್ದೇಶಕರ ಸಭೆಗಳು ಮತ್ತು ವಾರ್ಷಿಕ ಸಾಮಾನ್ಯ ಸಭೆ ಯಶಸ್ವಿಯಾಗಿ ನಡೆಯುತ್ತವೆ.


ಎಲ್ಲಾ ಶಾಖೆಗಳಲ್ಲಿ CBS ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಯಾವುದೇ ಶಾಖೆಯಿಂದ ಗ್ರಾಹಕರು ತಮ್ಮ ಖಾತೆ ವ್ಯವಹಾರಗಳನ್ನು ಸುಲಭವಾಗಿ ನಡೆಸುವ ವ್ಯವಸ್ಥೆ ಮಾಡಲಾಗಿದೆ. ಭವಿಷ್ಯದ ವಿಸ್ತರಣೆಯ ಭಾಗವಾಗಿ ರಾಮದುರ್ಗ, ಸವದತ್ತಿ, ಮೂಡಲಗಿ, ಯರಗಟ್ಟಿ ಹಾಗೂ ಬೆಳಗಾವಿ ಸ್ಥಳಗಳಲ್ಲಿ ಹೊಸ ಶಾಖೆಗಳನ್ನು ಆರಂಭಿಸುವ ಯೋಜನೆ ಹೊಂದಿದೆ. ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ 95% ಹಾಗೂ ಪದವಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಪುರಸ್ಕಾರ ನೀಡುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು, ಬ್ಯಾಂಕುಗಳು, ಸಲಹಾ ಸಮಿತಿಗಳು ಹಾಗೂ ಸದಸ್ಯರ ಸಹಕಾರದಿಂದ ಸಂಘವು ನಿರಂತರವಾಗಿ ಬೆಳೆಯುತ್ತಿದ್ದು, ಸದಸ್ಯರೊಂದಿಗೆ ಬೆಳೆದು ಸಮಾಜದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಬದ್ಧವಾಗಿರುವ ಸಹಕಾರ ಕುಟುಂಬವಾಗಿದೆ.


our testimonials

Clients on Talking